ಸೂಕ್ಷ್ಮ ಜೀವಿ ಪ್ರತಿರೋಧಕಗಳ ಜವಾಬ್ದಾರಿಯುತ ನಿರ್ವಹಣೆ
ಆರೋಗ್ಯವೇ ಭಾಗ್ಯ
ಆರೋಗ್ಯವನ್ನು ಕಾಪಾಡಿಕೊಳ್ಳುವುದು ,ರೋಗಗಳನ್ನು ತಡೆಗಟ್ಟುವುದು ,ಚಿಕಿತ್ಸೆಗಿಂತ ಉತ್ತಮ.
ಸೂಕ್ಷ್ಮಜೀವಿಪ್ರತಿರೋಧಕಗಳ ಬಳಿಕೆ ೨೧ ನೆಯ ಶತಮಾನದಲ್ಲಿ ಆರೋಗ್ಯಕ್ಷೇತ್ರದಲ್ಲಿ ಪ್ರಾಮುಖ್ಯ ಬದಲಾವಣೆಗಳನ್ನು ತಂದಿದೆ .ಕ್ಯಾನ್ಸರ್ ,ಅಂಗಾಂಗಗಳ ಕಸಿ ,ಶತ್ರಶಿಕಿತ್ಸೆ ,ಇನ್ನು ಅನೇಕ ವಲಯಗಳಲ್ಲಿ ಕೋಟ್ಯಂತರ ರೋಗಿಗಳ ಜೀವ ಉಳಿಯುವುದರಲ್ಲಿ ಬಹುಪಾಲು ಸೂಕ್ಷ್ಮಜೀವಿ ಪ್ರತಿರೋಧಕಗಳದ್ದಾಗಿದೆ . ಗುಣಮಟ್ಟದ ಆರೋಗ್ಯ್ಕ್ಕೆ ಕಾರಣಕರ್ತವಾಗಿದೆ.
ವಿಷಾದಕರ ಸಂಗತಿಯಂದರೆ , ಇವುಗಳ ಅತಿಯಾದಬಳಕೆ ,ದುರ್ಬಳಕೆ ಹೆಚ್ಚುತ್ತಿದೆ .ಇದು ಪ್ರತಿರೋಧಕ್ಕೆ ಕಾರಣವಾಗಿದೆ . ಸಾಧಾರಣ ಸೋಂಕುಗಳನ್ನು ಗುಣಪಡಿಸಲು ಸಾಧ್ಯವಾಗುತ್ತಿಲ್ಲ .ಆಸ್ಪತ್ರೆಗಳಲ್ಲಿ ಗುಣಹೊಂದಲು ಹೆಚ್ಚುದಿನಗಳು ಇರಬೇಕಾಗಿ ಬರುತ್ತಿದೆ . ರೋಗಿಗಳ ಕುಟುಂಬಗಳಿಗೆ ಹಣಕಾಸಿನ ಹೆಚ್ಚು ವೆಚ್ಚವಾಗುತ್ತಿದೆ . ಸಾಮಾನ್ಯವಾಗಿ ವಾಸಿಮಾಡಬಹುದಾದ ಸೋಂಕುಗಳಿಗೆ ಚಿಕಿತ್ಸೆ ವಿಫಲವಾಗುತ್ತಿದೆ . ಜೀವಗಳ ಹಾನಿಯಾಗುತ್ತಿದೆ .
ಪ್ರತಿರೋಧವನ್ನು ತಡೆಯುವುದರಲ್ಲಿ ಪ್ರತಿಯೊಬ್ಬ ನಾಗರಿಕನ ,ಪಾತ್ರ ,ಜವಾಬ್ದಾರಿ ಮುಖ್ಯವಾಗಿದೆ .
ವಿಶ್ವ ಆರೋಗ್ಯ ಕೇಂದ್ರದ ಮಾಹಿತಿಯಂತೆ , ಪ್ರತಿರೋಧದಿಂದ ಊಹೆಗೂ ನಿಲುಕದ ಜಾಗತಿಕ ಬೆದರಿಕೆ ,ಮನುಷ್ಯ ಕುಲಕ್ಕೆ ಉಂಟಾಗಿದೆ .ಕೋಟ್ಯಂತರ ಜೀವಹಾನಿ ,ಧನಹಾನಿಯಾಗಿದೆ . ನಮ್ಮ ಸಮಯ ಮುಂದೋಡುತ್ತಿದೆ .
ನಾವೆಲ್ಲರೂ ಒಟ್ಟಾಗಿ ಸೂಕ್ಷ್ಮಜ್ಜೆವಿ ಪ್ರತಿರೋಧವನ್ನು ತಡೆಗಟ್ಟೋಣ .
ವಿಶ್ವ ಆರೋಗ್ಯ ಕೇಂದ್ರದ ೨೦೨೨ ನೆಯ ಉದ್ದೇಶವು ಇದಾಗಿದೆ .
ಈ ನಿಟ್ಟಿನಲ್ಲಿ ,ಸಮಾಜದಲ್ಲಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯಗಳೆಂದರೆ ………….
೧. ಆಹಾರ ,ಕುಡಿಯುವನೀರಿನ ನೈರ್ಮಲ್ಯತೆಗೆ ಆದ್ಯತೆಕೊಟ್ಟು ,ಪ್ರತಿಯೊಂದು ಸನ್ನಿವೇಶದಲ್ಲೂ ಪಾಲಿಸುವುದು .
೨. ಅನಾರೋಗ್ಯದಿಂದಿರುವಾಗ ವೈದ್ಯರನ್ನು ಭೇಟಿಮಾಡಿ ,ವೈದ್ಯರ ಸಲಹೆಯನ್ನು ಚಾಚೂತಪ್ಪದೆ ಪರಿಪಾಲಿಸಬೇಕು .
ಪ್ರತಿರೋಧಕಗಳನ್ನು ನಿರ್ದಿಷ್ಟ ಸಮಯ ತೆಗೆದುಕೊಳ್ಳಬೇಕು .ಸುಧಾರಣೆಯಾದರು , ನಿರ್ದಿಷ್ಟ ಸಮಯವನ್ನು ಪಾಲಿಸಬೇಕು .
೩.ಕೆಲವು ಕಾಯಿಲೆಗಳನ್ನು ತಡೆಗಟ್ಟುವುದರಲ್ಲಿ ಲಸಿಕೆಗಳು ಮುಖ್ಯ . ವೈದ್ಯರ ಮಾಹಿತಿಯಂತೆ ಸಮಯಕ್ಕೆ ಸರಿಯಾಗಿ ಲಸಿಕೆಗಳನ್ನು ತೆಗೆದುಕೊಳ್ಳಬೇಕು .
೪.ಕೆಮ್ಮು ನೆಗಡಿ ,ಜ್ವರ ಇದ್ದಾಗ ,ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ,ಮಾಸ್ಕ ಧರಿಸಬೇಕು . ಇನ್ನೊಬ್ಬರ ಸಂಪರ್ಕವನ್ನು ಮಾಡಬಾರದು.
ನಮ್ಮ ಮುಂದಿನ ಪೀಳಿಗೆ ,ಸಮಾಜ ,ಆರೋಗ್ಯದಿಂದಿರಬೇಕಾದರೆ , ನಾವು ಇಂದು ಈರೀತಿಯ ಜವಾಬ್ದಾರಿಯುತವಾಗಿ ಸೂಕ್ಷ್ಮಜ್ಜೆವಿ ಪ್ರತಿರೋಧಕಗಳನ್ನು ,ನಿರ್ದಿಷ್ಟ ರೋಗಗಳಿಗೆ ,ವೈದ್ಯರ ಸಲಹೆಯ ಮೇರೆಗೆ ತೆಗೆದುಕೊಳ್ಳಬೇಕು .
ಕಾಳಜಿಯಿಂದ ,ವಿನಮ್ರತೆಯಿಂದ ಕೇಳಿಕೊಳ್ಳುತ್ತೇನೆ .
ವೈದ್ಯೆ ರಾಧಾ
ತೀವ್ರನಿಗಾ ಘಟ್ಟದ ತಜ್ಞೆ
ರಾಮಯ್ಯ ಆಸ್ಪತ್ರೆ
ಬೆಂಗಳೂರು .
ನವೆಿಂಬರ್ ೨೨